ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕರಾಗಿ ನಟಿಸಿರುವ ‘ಕ್ರೇಜಿಲೋಕ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಾನ್ಫಿಡೆಂಟ್ ಗ್ರೂಪ್ಸ್ ಅರ್ಪಿಸುವ, ಶಾಂತಾ ಪಿಕ್ಚರ್ಸ್ ಲಾಂಛನದಲ್ಲಿ ಎನ್.ರವಿಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.
ಕವಿತಾಲಂಕೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ಡೈಸಿ ಬೋಪಣ್ಣ ಅಭಿನಯಿಸಿದ್ದಾರೆ. ಭಾರತಿ ವಿಷ್ಣುವರ್ಧನ, ಹರ್ಷಿಕಾಪೂಣಚ್ಛ, ಅವಿನಾಶ್, ನೀನಾಸಂ ಅಶ್ವತ್ ಮುಂತಾದವರು ‘ಕ್ರೇಜಿಲೋಕದ ತಾರಾಬಳಗದಲ್ಲಿದ್ದಾರೆ.
ಎ.ಸಿ.ಮಹೇಂದರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋ.ನಿ.ಹರ್ಷರ ಸಂಕಲನವಿದೆ. ಇಮ್ರಾನ್ ನೃತ್ಯ ನಿರ್ದೇಶನ, ಕುಮಾರ್ ಕಲಾ ನಿರ್ದೇಶನ ಹಾಗೂ ರವಿಶಂಕರ್ ನಿರ್ಮಾಣ ನಿರ್ವಹಣೆ ‘ಕ್ರೇಜಿಲೋಕ ಚಿತ್ರಕ್ಕಿದೆ.